
28th September 2024
ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ಪ್ರಾಥಮಿಕ ವರ್ತಮಾನ ವರದಿ (ಎಫ್ಐಆರ್) ದಾಖಲಿಸಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯ ನಿರ್ದೇಶನದ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇಂದು ಸಿದ್ದುಗೆ ಮೂರನೇ ಸಂಕಷ್ಟ ಎದುರಾಗಿದೆ. ಹಾಗಾದ್ರೆ ಸಿದ್ದು ಮುಂದಿನ ನಡೆಯಬೇಕು? ಯಾವ ಯಾವ ಕೇಸ್ ಆಗಿದ್ದಾರೆ ಗೊತ್ತಾ? ಈ ಕುರಿತು ಸಂಪೂರ್ಣ ಡೀಟೆಲ್ಸ್ ಇಲ್ಲಿದೆ
ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮೈಸೂರಿನ ಲೋಕಾಯುಕ್ತರು ಕೇಸ್ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲನೇ ಆರೋಪಿ (ಎ1) ಆಗಿದ್ದರೆ, ಅವರ ಪತ್ನಿ ಬಿಎಂ ಪಾರ್ವತಿ ಎರಡನೇ ಆರೋಪಿ (ಎ2) ಯಾಗಿದ್ದಾರೆ. ಸಿಎಂ ಬಾಮೈದ ಬಿಎಂ ಮಲ್ಲಿಕಾರ್ಜುನ ಸ್ವಾಮಿ ಮೂರನೇ ಆರೋಪಿಯಾಗಿದ್ದು, ಜಾಗದ ಮಾಲೀಕರಾಗಿದ್ದ ಜೆ ದೇವರಾಜು ನಾಲ್ಕನೇ ಆರೋಪಿಯಾಗಿದ್ದಾರೆ. ಕೇಸ್ ನಂಬರ್ 11/2024 ಅಡಿ ಲೋಕಾಯುಕ್ತ ಅಧಿಕಾರಿಗಳು ಅಧಿಕೃತವಾಗಿ ಎಫ್ಐಆರ್ ದಾಖಲಿಸಿದ್ದಾರೆ. ಲೋಕಾಯುಕ್ತ ಎಸ್ಪಿ ಉದೇಶ್ ದೂರು ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಕಲಂಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 120ಬಿ ಕ್ರಿಮಿನಲ್ ಪಿತೂರಿ, ಒಳ ಸಂಚು ಇದು ಸಾಬೀತಾದರೆ ಜೀವಾವಧಿ ಶಿಕ್ಷೆ ನೀಡಬಹುದು. ಐಪಿಸಿ ಸೆಕ್ಷನ್ 166 - ಸರ್ಕಾರಿ ಸೇವಕರಿಂದ ಕಾನೂನು ಉಲ್ಲಂಘನೆ. ಐಪಿಸಿ ಸೆಕ್ಷನ್ 403 - ಅಪ್ರಾಮಾಣಿಕವಾಗಿ ಆಸ್ತಿಯ ದುರ್ಬಳಕೆ. ಐಪಿಸಿ ಸೆಕ್ಷನ್ 406 - ಅಪರಾಧಿಕ ನಂಬಿಕೆ ದ್ರೋಹ ಇದಕ್ಕೆ 3ವರ್ಷ ಜೈಲು ಅಥವಾ ದಂಡ ವಿಧಿಸಬಹುದು. ಐಪಿಸಿ ಸೆಕ್ಷನ್ 420 - ವಂಚನೆ ಅಂದರೆ ಮೋಸದಿಂದ ಲಾಭ ಪಡೆಯುವುದು.
ಐಪಿಸಿ ಸೆಕ್ಷನ್ 426 - ಕಿಡಿಗೇಡಿತನ ಇದಕ್ಕೆ 3 ತಿಂಗಳ ಶಿಕ್ಷೆ ಅಥವಾ ದಂಡ ಹಾಕಬಹುದು. ಐಪಿಸಿ ಸೆಕ್ಷನ್ 465 ನಕಲಿ ದಾಖಲೆ ಸೃಷ್ಟಿ, ಐಪಿಸಿ ಸೆಕ್ಷನ್ 468 - ನಕಲಿ ದಾಖಲೆ ಸೃಷ್ಟಿಸಿ ಲಾಭ ಪಡೆದುಕೊಳ್ಳುವುದು ಅಂದರೆ ಇದಕ್ಕೆ 5 ವರ್ಷ ಜೈಲು ಅಥವಾ ದಂಡವಿದೆ. ಐಪಿಸಿ ಸೆಕ್ಷನ್ 340 ವ್ಯಕ್ತಿಯ ಕಾರ್ಯಚಟುವಟಿಕೆಗೆ ನಿರ್ಬಂಧ. ಐಪಿಸಿ ಸೆಕ್ಷನ್ 351 ನಿರ್ಬಂಧಿಸಿದ ವ್ಯಕ್ತಿ ಕಾರ್ಯಮುಂದುವರಿಸಿದರೆ ದಾಳಿ ನಡೆಸುವ ಬೆದರಿಕೆ. ಐಪಿಸಿ ಸೆಕ್ಷನ್ 9 ಲಂಚ ಸ್ವೀಕಾರ, ಅಥವಾ ಲಂಚ ನೀಡಲು ಶಿಕ್ಷೆ, ವೈಯಕ್ತಿಕ ಪ್ರಭಾವ ಹಾಗೂ ಐಪಿಸಿ ಸೆಕ್ಷನ್ 13 ಸರಕಾರಿ ನೌಕರನಿಂದ ಅಧಿಕಾರ ದುರ್ಬಳಕೆ ಎನ್ನುವ ಕಾಯ್ದೆಯಡಿ ಕೇಸ್ ದಾಖಲಾಗಿದೆ.
ಮುಡಾ ಅಕ್ರಮ ಆರೋಪ ಸಂಬAಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆರೋಪಿಯನ್ನಾಗಿ ಪರಿಗಣಿಸಿ ಸಿಆರ್ಪಿಸಿ ಅನ್ವಯ ತನಿಖೆ ನಡೆಸುವಂತೆ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಬುಧವಾರ ಆದೇಶಿಸಿತ್ತು. ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದೂ ನಿರ್ದೇಶಿಸಿತ್ತು. ನ್ಯಾಯಾಲಯದ ಆದೇಶ ಸಕ್ಷಮ ಪ್ರಾಧಿಕಾರವಾದ ಲೋಕಾಯುಕ್ತ ಎಡಿಜಿಪಿಗೆ ತಲುಪಿತ್ತು. ಬಳಿಕ ಪ್ರಾಪರ್ ಮಾರ್ಗದಲ್ಲಿ ಮೈಸೂರು ಲೋಕಾಯುಕ್ತ ಎಸ್ಪಿಗೆ ವರ್ಗಾವಣೆಯಾಗಿತ್ತು. ಇದೀಗ ಪೊಲೀಸರು ಕೋರ್ಟ್ ಆದೇಶದ ಅನ್ವಯ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸಲಿದ್ದಾರೆ.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯಗೆ ದಿನಕ್ಕೊಂದು ಸಂಕಷ್ಟಗಳು ಎದುರಾಗುತ್ತಿವೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್!
12 ಸೆಕ್ಷನ್ನಡಿ ಕೇಸ್ ದಾಖಲು *ಟಗರಿಗೆ ಎದುರಾಯ್ತು ಮೂರನೇ ಸಂಕಷ್ಟ *ರಾಜೀನಾಮೆನಾ? ಹೋರಾಟನಾ?
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ